ಕಾಂತಾವರ ಕನ್ನಡ
ಸಂಘ ಮಾಂಬಾಡಿ ಭಾಗವತರ ಜೀವನ, ಸಾಧನೆ ಕುರಿತಂತೆ ಪುಸ್ತಕ ಪ್ರಕಟಿಸಿದೆ.
ಬರೆದವರು ಹಿರಿಯ
ವಿದ್ವಾಂಸ ಡಾ. ಪಾದೇಕಲ್ಲು ವಿಷ್ಣು ಭಟ್ಟರು. ಪುಸ್ತಕವು ಮಾಂಬಾಡಿ ಹಿರಿಯ ಭಾಗವತರ ಬಗ್ಗೆ
ವಿವರಣೆಗಳನ್ನು ದಾಖಲಿಸಿದ್ದು, ಅವರ ಕುಟುಂಬ, ಶಿಷ್ಯರ ವಿವರಗಳನ್ನು ನೀಡಿದೆ.
ಪಾದೇಕಲ್ಲು ಅವರು
ಮಾಂಬಾಡಿಯವರ ನೆರೆಕರೆಯವರಾಗಿದ್ದು, ಬಾಲ್ಯದಿಂದಲೂ ಆತ್ಮೀಯವಾಗಿ ಅವರನ್ನು ಬಲ್ಲವರು ಹಾಗೂ ಅವರ ಕುರಿತಾಗಿರುವ “ರಂಗವೈಖರಿ” ಅಭಿನಂದನ ಗ್ರಂಥದ ಸಹ
ಸಂಪಾದಕ. ೪೪ ಪುಟಗಳ ಈ ಗ್ರಂಥ ಕನ್ನಡ ಸಂಘ , ಕಾಂತಾವರ ಇವರ “ನಾಡಿಗೆ ನಮಸ್ಕಾರ” ಮಾಲಿಕೆಯಲ್ಲಿ
ಪ್ರಕಟವಾಗಿದ್ದು, ಯಕ್ಷಗಾನಾಸಕ್ತರಿಗೊಂದು ಅಮೂಲ್ಯ ಸಂಗ್ರಹ.
ಪ್ರಕಟಣೆಯ
ವರ್ಷ:೨೦೧೬
ಬೆಲೆ:೪೫ ರೂ
No comments:
Post a Comment
Note: only a member of this blog may post a comment.